Category Archives: ಭಾವಲೋಕ…!!!

ಮಂದಾಕಿನಿ

ತನ್ನ ಹವಾನಿಯಂತ್ರಿತ ಕೊಠಡಿಯಲ್ಲಿ ಕೋಟ್ಯಾಧಿಪತಿ ಉದ್ಯಮಿ ಯಾಜಿ ಶತಪಥ ತಿರುಗುತ್ತಿದ್ದ. ಅವನ ಕರೆಗೆ ಓಗೊಟ್ಟು ಒಳಬಂದ ಭಾರದ್ವಾಜ. “ಮಿ. ಭಾರದ್ವಾಜ್, ನನಗೆ ಹುಚ್ಚು ಹಿಡಿಯುವುದೊಂದು ಬಾಕಿ. ನಮ್ಮ ಪ್ಲಾನ್ ಈ ರೀತಿ ಪರಿಣಾಮ ಉಂಟುಮಾಡುತ್ತದೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ” ಕ್ಷೋಭೆಯಿಂದ ಹೇಳಿದ ಯಾಜಿ. ಅವನ ಕೋಣೆಯ ತುಂಬೆಲ್ಲ ಸಾವಿರಾರು ಪತ್ರಗಳು, ಗಳಿಗೆಗೊಮ್ಮೆ ರಿಂಗಾಗುವ ಫೋನುಗಳು.

Posted in ಭಾವಲೋಕ...!!! | Leave a comment

“ಬಳಸಿ ಮತ್ತು ಬೀಸಾಡಿ” ಎಂಬ ವ್ಯಾಧಿ

ಈ ‘use and throw’ ಎಂಬ ವಾಕ್ಯವನ್ನು ಯಾರು ಮೊದಲು ಹೇಳಿ ಆಚರಣೆಗೆ ತಂದರೋ ಗೊತ್ತಿಲ್ಲ, ಆ ಮಹಾನುಭಾವ ಸಿಕ್ಕಿದರೆ ಮೊದಲು ಆತನನ್ನು ಎಸೆಯಬೇಕು!! ಪ್ರಕೃತಿಯನ್ನು ಮನುಷ್ಯ ಅದೆಷ್ಟು ಕೇವಲವಾಗಿ ನೋಡುತ್ತಿದಾನೆ ಎಂಬುದಕ್ಕೆ ಈ ‘ಬಳಸಿ ಮತ್ತು ಬೀಸಾಡಿ’ ಎಂಬ ಧೋರಣೆಯೇ ಸಾಕ್ಷಿ. ಲೋಟ, ತಟ್ಟೆ, ಬಾಟಲಿ, ಪೆನ್ನು, ಕಾಗದ/ಪ್ಲಾಸ್ಟಿಕ್ ಕವರುಗಳು, ಜ್ಯೂಸು ಟಿನ್ ಗಳು … Continue reading

Posted in ಭಾವಲೋಕ...!!! | Leave a comment

ರೇಸಿಸಂನ ಬಲಿಪಶುವೊಬ್ಬಳ ಕಥೆ-ವ್ಯಥೆ!!

“ಆಫ್ರಿಕಾ ಮತ್ತು ಅಮೆರಿಕಾದಂಥ ದೇಶಗಳಲ್ಲಿ ವರ್ಣಬೇಧ ನೀತಿ ಜಾರಿಯಲ್ಲಿದ್ದ ಕಳೆದ ಶತಮಾನದಲ್ಲಿ ಕಪ್ಪು ಜನರನ್ನು ಗುಲಾಮರೆಂದು ಮಾರುಕಟ್ಟೆಯಲ್ಲಿ ಮಾರುತ್ತಿದ್ದರು” “ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ರೈಲಿನಲ್ಲಿ ಪ್ರಯಾಣಿಸುವಾಗ ಬಿಳಿಯನೊಬ್ಬ ಆವರನ್ನು ತಳ್ಳಿದ.” “ಕಪ್ಪು ವರ್ಣೀಯರ ಹಕ್ಕುಗಳಿಗಾಗಿ ನೆಲ್ಸನ್ ಮಂಡೇಲಾ ಬಹಳ ವರ್ಷಗಳಿಂದ ಹೋರಾಡುತ್ತಿದ್ದಾರೆ.” ಇತ್ಯಾದಿ ವಿಷಯಗಳನ್ನು ಪ್ರೈಮರಿ-ಹೈಸ್ಕೂಲುಗಳಲ್ಲಿ ಓದಿ ಸಮಾಜವಿಜ್ಞಾನ ಪರೀಕ್ಷೆಯಲ್ಲಿ ಪುಟಗಟ್ಟಲೇ ಗೀಚುವಾಗ ನಾನೂ ಕೂಡ … Continue reading

Posted in ಭಾವಲೋಕ...!!! | 9 Comments

ನನ್ನ walk ಸ್ವಾತಂತ್ರ್ಯ

ಹೌದು, ಈ ಶೀರ್ಷಿಕೆ ಉದ್ದೇಶಪೂರ್ವಕ. ನಾನಿಲ್ಲಿ ಕನ್ನಡ (ಮೂಲತಃ ಸಂಸ್ಕೃತ)ದ ವಾಕ್ ಸ್ವಾತಂತ್ರ್ಯದ ಬಗ್ಗೆ ಹೇಳಲು ಹೊರಟಿದ್ದಲ್ಲ. ನನಗೆ ದೊರಕಿದ walk ಸ್ವಾತಂತ್ರ್ಯದ ಬಗ್ಗೆ!! ಅಂದರೆ walking ಅಥವಾ ನಡೆಯಲು ಸಿಕ್ಕ ಸ್ವಾತಂತ್ರ್ಯವಲ್ಲ.. ನಡೆಯುವುದರಿಂದ ಸ್ವಾತಂತ್ರ್ಯ ಅಥವಾ ಮುಕ್ತಿ ಸಿಕ್ಕಿದ ಬಗ್ಗೆ ಹೇಳಲು ಹೊರಟಿದ್ದು. ಮತ್ತು ಈ ಕಥನ ನನಗೆ 3-4 ವರ್ಷ ವಯಸ್ಸು ಇದ್ದಾಗಿನಿಂದ … Continue reading

Posted in ಭಾವಲೋಕ...!!! | 13 Comments

ಕಾವೇರಿ = ಕನ್ನಡ/ಕನ್ನಡಿಗ?

ಈ ಪ್ರಶ್ನೆ ನನ್ನನ್ನು ಚಿಕ್ಕಂದಿನಿಂದಲೂ ಕಾಡಿದೆ. ಕಾರಣ ನಮ್ಮ ಸಿನಿಮಾಗಳು ಮತ್ತು ಅವುಗಳ ಹಾಡುಗಳು. ಕನ್ನಡ ಭಾಷೆ ಮತ್ತು ಕರ್ನಾಟಕಕ್ಕೆ ಸಂಬಂಧಿಸಿದ ಯಾವುದೇ ಹಾಡು ಇದ್ದರೂ ಅದರಲ್ಲಿ ಕಾವೇರಿಯ ಉಲ್ಲೇಖ ಪಕ್ಕಾ. ಯಾಕೆ ಕಾವೇರಿ ನದಿಗೆ ಇಷ್ಟೊಂದು ಪ್ರಾಮುಖ್ಯತೆ ಎಂಬುದು ದೇವರಾಣೆಗೂ ಅರ್ಥವಾಗಿರಲಿಲ್ಲ.

Posted in ಭಾವಲೋಕ...!!! | 8 Comments

ಬಂಟ

ಕಪ್ಪಗಿದ್ದರೆ ಕರಿಯ, ಬೆಳ್ಳಗಿದ್ದರೆ ಬೆಳ್ಳಿ, ಸ್ವಲ್ಪ stylish ಆಗಿ ಬೇಕಿದ್ರೆ ಟೀಪೂ, ಟಾಮಿ… ನಾಯಿಗೆ ಇಡಬಹುದಾದ ಹೆಸರು ಇಷ್ಟೇ ಎಂದು ನಂಬಿದ್ದ ಶಿರಸಿಯಂಥ ಊರಿನಲ್ಲಿ ನವ ನಾವೀನ್ಯತೆ ಉಳ್ಳ ಹೆಸರಿನವನು ನಮ್ಮ ಬಂಟ. ಸಂಸ್ಕೃತದ ‘ಭಟ’ ಎಂಬ ಶಬ್ದದ ತದ್ಭವ ರೂಪ ಬಂಟ. ಅಂದರೆ ಸೇವಕ. ನಾಯಿ ಎಂದರೆ ನಾಯಿ ಮಾತ್ರ..

Posted in ಭಾವಲೋಕ...!!! | 8 Comments

ಮನ್ನಣೆಯ ದಾಹ…..

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ | ಚಿನ್ನದಾತುರಕಿಂತ ಹೆಣ್ಣು ಗಂಡೊಲವು || ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ| ತಿನ್ನುವುದದಾತ್ಮವನೆ – ಮಂಕುತಿಮ್ಮ || ಡಿ ವಿ ಜಿ ಯವರ ‘ಮಂಕುತಿಮ್ಮನ ಕಗ್ಗ’ ದ ಈ ಸಾಲುಗಳು ಎಂದೆಂದಿಗೂ ಪ್ರಸ್ತುತ. ಆದರೆ ಇತ್ತೀಚಿಗೆ ನನಗೆ ಇದರ ಕೊನೆಯ ಸಾಲುಗಳು ಸ್ವಲ್ಪ ಹೆಚ್ಚೇ ಕಾಡಲು ಪ್ರಾರಂಭಿಸಿತು.  

Posted in ಭಾವಲೋಕ...!!! | 4 Comments

“ವಿವಿಧತೆಯಲ್ಲಿ ಏಕತೆ” ಸಾಕ್ಷಾತ್ಕಾರವಾದ ಕ್ಷಣಗಳು !!

ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲಾ ಅಭ್ಯಾಸದ ದಿನಗಳಲ್ಲಿ ಬಹಳಷ್ಟು ಬಾರಿ ಕೇಳಿದ ವಾಕ್ಯಗಳು – “ನಮ್ಮ ದೇಶ ಭಾರತ ಇಪ್ಪತ್ನಾಲ್ಕು (1990ರ ಸಮಯ) ರಾಜ್ಯಗಳನ್ನು ಹೊಂದಿದೆ. ವಿವಿಧ ಸಂಸ್ಕೃತಿ, ಭಾಷೆ, ಆಚಾರ, ವಿಚಾರಗಳನ್ನು ಒಳಗೊಂಡಂತಹ ದೇಶ. ಈ ಮೂಲಕವಾಗಿ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ದೇಶ”.  ಇಂಥ ವಾಕ್ಯಗಳನ್ನು ಅದೆಷ್ಟೋ ಬಾರಿ ಶಾಲಾ ಭಾಷಣಗಳಲ್ಲಿಯೋ, ಪ್ರಬಂಧ ಸ್ಪರ್ಧೆಗಳಲ್ಲಿಯೋ ಬಳಸಿಯಾಗಿತ್ತು. 

Posted in ಭಾವಲೋಕ...!!! | 3 Comments

ಬಿ ಬಿ ಎಂ ಪಿ ಚುನಾವಣೆ ಮತ್ತು ಮಹಿಳಾ ಮೀಸಲಾತಿ !!

ಆಗಸ್ಟ್ ತಿಂಗಳ ಒಂದು ದಿನ. ಕಾಲೇಜ್ ನಿಂದ ಮನೆಗೆ ಬಂದು ಪೇಪರ್ ಓದುತ್ತಾ ಕುಳಿತಿದ್ದೆ . ಮನೆಯ ಹಿಂಭಾಗದ ರಸ್ತೆಯಲ್ಲಿ ಆಟೋ ದಲ್ಲಿ ಬಿ ಬಿ ಎಂ ಪಿ ಚುನಾವಣೆಯ ಪ್ರಚಾರ ಮಾಡುತ್ತಿರುವುದು ಕೇಳಿಸಿತು . ಸುಮ್ಮನೆ ಕಿವಿಗೊಟ್ಟೆ …  “ಜನಾನುರಾಗಿ , ಜನಪರ ವ್ಯಕ್ತಿ, ಬಡವರ ಬಂಧು, ದೀನ ದಲಿತರ ಆಶಾ ಕಿರಣ, ನಮ್ಮ ನಿಮ್ಮೆಲ್ಲರ … Continue reading

Posted in ಭಾವಲೋಕ...!!! | Leave a comment