Monthly Archives: August 2017

ಮಂದಾಕಿನಿ

ತನ್ನ ಹವಾನಿಯಂತ್ರಿತ ಕೊಠಡಿಯಲ್ಲಿ ಕೋಟ್ಯಾಧಿಪತಿ ಉದ್ಯಮಿ ಯಾಜಿ ಶತಪಥ ತಿರುಗುತ್ತಿದ್ದ. ಅವನ ಕರೆಗೆ ಓಗೊಟ್ಟು ಒಳಬಂದ ಭಾರದ್ವಾಜ. “ಮಿ. ಭಾರದ್ವಾಜ್, ನನಗೆ ಹುಚ್ಚು ಹಿಡಿಯುವುದೊಂದು ಬಾಕಿ. ನಮ್ಮ ಪ್ಲಾನ್ ಈ ರೀತಿ ಪರಿಣಾಮ ಉಂಟುಮಾಡುತ್ತದೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ” ಕ್ಷೋಭೆಯಿಂದ ಹೇಳಿದ ಯಾಜಿ. ಅವನ ಕೋಣೆಯ ತುಂಬೆಲ್ಲ ಸಾವಿರಾರು ಪತ್ರಗಳು, ಗಳಿಗೆಗೊಮ್ಮೆ ರಿಂಗಾಗುವ ಫೋನುಗಳು.

Posted in ಭಾವಲೋಕ...!!! | Leave a comment

“ಬಳಸಿ ಮತ್ತು ಬೀಸಾಡಿ” ಎಂಬ ವ್ಯಾಧಿ

ಈ ‘use and throw’ ಎಂಬ ವಾಕ್ಯವನ್ನು ಯಾರು ಮೊದಲು ಹೇಳಿ ಆಚರಣೆಗೆ ತಂದರೋ ಗೊತ್ತಿಲ್ಲ, ಆ ಮಹಾನುಭಾವ ಸಿಕ್ಕಿದರೆ ಮೊದಲು ಆತನನ್ನು ಎಸೆಯಬೇಕು!! ಪ್ರಕೃತಿಯನ್ನು ಮನುಷ್ಯ ಅದೆಷ್ಟು ಕೇವಲವಾಗಿ ನೋಡುತ್ತಿದಾನೆ ಎಂಬುದಕ್ಕೆ ಈ ‘ಬಳಸಿ ಮತ್ತು ಬೀಸಾಡಿ’ ಎಂಬ ಧೋರಣೆಯೇ ಸಾಕ್ಷಿ. ಲೋಟ, ತಟ್ಟೆ, ಬಾಟಲಿ, ಪೆನ್ನು, ಕಾಗದ/ಪ್ಲಾಸ್ಟಿಕ್ ಕವರುಗಳು, ಜ್ಯೂಸು ಟಿನ್ ಗಳು … Continue reading

Posted in ಭಾವಲೋಕ...!!! | Leave a comment